Tuesday, April 12, 2011

ಈ ಎದೆ ತಳಮಳಕೇ..!!!!!!

ಈ ಎದೆ ತಳಮಳಕೇ
ನೀ ಬಂದೆ ಉಸಿರಾಗಿ
ಕತ್ತಲಾದ ಈ ಮನಕೇ
ನೀ ಬಂದೆ ಬೆಳಕಾಗಿ
     ಮುಚ್ಚಿಹಿಟ್ಟ ಮೋಹಗಳು
     ರೆಕ್ಕೆ ಬಂದು ಹಾರುತ್ತಿದೆ
     ಬಚ್ಚಿಹಿಟ್ಟ ಭಾವಗಳು 
     ನಿನ್ನ ಹಿಂದೆ ಅಲೆಯುತ್ತಿದೆ 
ಮುಂದೇನು ಮಾಡಲಿ,
ಇನ್ನೇಗೆ ಬಾಳಲಿ, ನೀನೆ ಹೇಳೆಯಾ 
ಬಂದೊಮ್ಮೆ ಪ್ರೀತಿ ಮಾಡೆಯಾ  || ಪ ||

ತಾಳ ಹಾಕಲೆಂದು ಬಂದ
ನನ್ನ ಎದೆಯ ಹಾಡಿಗೆ
ಹೇಳಲಾಗದಂತ ಅಂದ
ಸೆಳೆಯೀತದರ ಪಾಡಿಗೆ
     ಸೋತುಬಿಡುವೆನೂ ನಾನು
     ಇಲ್ಲ ಈಗ ಬೇರೆ ದಾರಿ
     ನನ್ನೆದೆಯ ಗೂಡಿಗೇ ನೀನು
     ಜಿಗಿದು ಬೇಗ ಬಾರೆ ಹಾರಿ ||

ದಿನಾ ನಡೆವ ದಾರಿಯಲ್ಲಿ
ಹೊಸ ಹೆಜ್ಜೆ ಗುರುತುಗಳು
ಮನಾ ಅಲೆವ ಊರಿನಲ್ಲಿ
ನಿನ್ನದೊಂದೆ ನೆನಪುಗಳು
     ತಂದು ಹಾಕಲಾರೆಯ ನೀನು
     ಈ ಖಾಲಿಕೊರಳಿಗೊಲವಿನ  ಮಾಲೆ
     ಮೌನ ಒಂದೇ ನನಗೆ ಇನ್ನು
     ಮಾತು ಮರೆತು ಹೋದ ಮೇಲೆ ||
                                                     -ಅರಶಿ