Saturday, May 12, 2012


ಅಮ್ಮ ನೀನು ನನ್ನಿಂದ ದೂರ ಇರಬಹುದು, ಆದರೆ ನಿನ್ನ ಪ್ರೀತಿ, ಆಶೀರ್ವಾದ ಮಾತ್ರ ಸದಾ ನನ್ನ ಜೋತೆಗಿರುತ್ತೆ. ಆ ಮೂಲಕ ಸದಾ ನೀನು ನನ್ನ  ಜೋತೆಗಿರ್ತೀಯ. ಒಂದಲ್ಲ ಒಂದಿನ ನನ್ನ ಮಗ ಏನಾದ್ರೂ ಸಾದಿಸ್ತಾನೆ ಅನ್ನೋ ನಂಬಿಕೆಯಲ್ಲಿ ದಿನಗಳನ್ನ ಕಳೀತ ನನ್ನ ಕಾಯ್ತಾ ಇದೀಯ, ನಿನ್ನ ನಂಬಿಕೇನ ಆದಷ್ಟು ಬೇಗ ನಿಜ ಮಾಡ್ತೀನಿ. ಆ ದಿಸೆಯಲ್ಲಿ ಹೋರಾಡ್ತಾ ಇದೀನಿ. 
ಸದಾ ನನ್ನ ಬಗ್ಗೆನೇ ತುಡಿಯೋ ನಿನ್ನ ಪ್ರೀತಿಗೆ, ನಿನ್ನ ಮಮತೆಗೆ ಸಮವಾಗೋದನ್ನ ನನ್ನಿಂದ ಈ ಜನ್ಮದಲ್ಲಿ ನೀಡಲು ಸಾದ್ಯವಿಲ್ಲ. 
ನೀ ಕೊಟ್ಟ ಈ ಜೀವದ , ಜೀವನದ ಋಣವ ಈ ಜನ್ಮವಲ್ಲ, ಏಳೇಳು ಜನ್ಮದಲ್ಲೂ ತೀರಿಸೋಕೆ ಸಾದ್ಯವಿಲ್ಲ ....
ಇನ್ನು ಹೆಚ್ಚೇನೂ ಹೇಳಲ್ಲ ,
 "ಬರಿದೆ ದೇಹ ನಾನು 
  ಅದರ ಜೀವ ನೀನು"
ಅಮ್ಮಾ HAPPY MOTHERS DAY ............... ಪ್ರತಿ ವರ್ಷದಂತೆ ಈ ವರ್ಷಕ್ಕೆ ಈ ಕವಿತೆಯ ಅರ್ಪಣೆ , ಪ್ರತೀ ವರ್ಷ ಗ್ರೀಟಿಂಗ್ ಕಾರ್ಡ್ ನಲ್ಲಿ ಕವಿತೆ ಬರದು ನೇರವಾಗಿ ಕೊಡ್ತಿದ್ದೆ, ಓದೋಕೆ ಬರದ ನೀ, ಮನಸಿನಲ್ಲಿ  ಓದಿಕೊಂಡು ಕಂಬನಿ ಮಿಡಿಯುತ್ತಿದ್ದೆ   .  ಈ ಬಾರಿ ನೇರವಾಗಿ ನೀಡಲು ಆಗುತ್ತಿಲ್ಲ ಕ್ಷಮಿಸು..... ಅಂತ  ನಾನ್ ಕೇಳ್ಬೇಕ? ಮೊದಲೇ ಕ್ಷಮಯಾಧರಿತ್ರಿ ನೀ .... love u forever.......

ತಾಯಿ ಪ್ರೀತಿಯ ಹೊತ್ತು ಬಂತು ಮದರ್ಸ್ ಡೇ
ತಾಯಿ ಪ್ರೀತಿಯ ಸಾರಲು ಬಂತು ಮದರ್ಸ್ ಡೇ |
ತಾಯಿ ಪ್ರೀತಿಯ ಹಾಳವನ್ನು 
ತಿಳಿದೋರಿಲ್ಲ, ತಿಳಿಯಲಾಗೋದಿಲ್ಲ
ತಾಯಿ ಮಮತೆಯ ಹೆತ್ತರವನ್ನು 
ಹತ್ತಿದವರಿಲ್ಲ, ಹತ್ತಲಾಗೋದಿಲ್ಲ 
ಅವಳೊಂದು ಪ್ರೀತಿಯ ಎವರೆಸ್ಟೂ
ಎಂದೆಂದೂ ನಮ್ಮಾ ಹೃದಯಕೆ ನಿಯರೆಸ್ಟೂ || ತಾಯಿ ||

ಮೊದಮೊದಲು ಭೂಮಿಗೆ ಬಂದಳು 
ಜೊತೆಯಲ್ಲೇ ಮಮತೆಯ ತಂದಳು 
ಧರೆಬೆಳಗೋ ದೀಪವ ಹಚ್ಚಿ 
ಆರದಂತೆ ಕಾದು ಕುಳಿತಳು 
ಅವಳೆಂದೂ ನಮ್ಮಾ ಬಾಳಿಗೆ ಡಿಯರೆಸ್ಟೂ
ಅವಳೆದುರು ಉಳಿದೋರೆಲ್ಲ ಫಾರೆಸ್ಟೂ || ತಾಯಿ ||

ತೊದತೊದಲು ಮಾತನು ತಂದಳು 
ತಾಹಸಿವಿದ್ದು ತುತ್ತನು ಕೊಟ್ಟಳು 
ನೋವೆಲ್ಲಾ ಒಬ್ಬಳೇ ಉಂಡು 
ಖುಶಿಹಂಚಿ ನೋವ ಮರೆತಳು 
ಪ್ರತಿಯೊಬ್ಬರ ಪ್ರೀತಿ ತುಂಬಾ ಶಾರ್ಟೆಸ್ಟೂ 
ಅಮ್ಮನೊಬ್ಬಳ ಪ್ರೀತಿ ತುಂಬಾ ಲಾಂಗೆಸ್ಟೂ || ತಾಯಿ ||

                                                           ---- ಅರಶಿ 






Thursday, May 10, 2012


ಕೋಗಿಲೆಗಿಂತ ಇಂಪು ಆ ದನಿ,
ಅವಳಾ ದನಿ ನಾನಿನ್ನು ಕೇಳಿಲ್ಲ
ಕೊರೆವ ಮಂಜಿನ ಹನಿಗಿಂತ ತಂಪು,
ಆ ಸ್ಪರ್ಶ ಅವಳಾ ಸ್ಪರ್ಶ ನಾನಿನ್ನು ಸ್ಪರ್ಶಿಸಿಲ್ಲ
    ಇರಬಹುದೇ ಎದೆಯಂತರಾಳದಲ್ಲಿ
    ನನ್ನ ಬಗೆ ಅವಳಲ್ಲಿ
    ಸಿಗಬಹುದೇ ಅವಕಾಶ ಮಾತಾಡಲು
    ನಿಂತು ಅವಳ ಬಳಿಯಲ್ಲಿ

ದಿನ ಮೈಸೋಕೋ ತಂಗಾಳಿಗೇಳುವೆ
ಅವಳ ಸೋಕಿ ನನ್ನೆಡೆ ಬಾ ಎಂದು
ದಿನ ಮೂಡೋ ಸೂರ್ಯನಿಗೇಳಿಕಳಿಸುವೆ
ಅವಳ ಕುಶಲ ಕೇಳಿ ತಾ ಎಂದು
   ಇನ್ನೆಷ್ಟು ನಾ ಬರೆಯಲಿ ಬರೆಯುತಿದ್ದರು
   ವಿವರಿಸಲಾಗದ ಮೂಡ ನಾನು
   ಇನ್ನು ಅರ್ಥವಾಗಲಿಲ್ಲ ನಿನಗೆ ಓದಿ ಕೂಡ ಹಾಗೆ
   ಚಲಿಸುತಿರುವ ಮೋಡ ನೀನು

                                                                                             -ಅರಶಿ