ಅಮ್ಮ ನೀನು ನನ್ನಿಂದ ದೂರ ಇರಬಹುದು, ಆದರೆ ನಿನ್ನ ಪ್ರೀತಿ, ಆಶೀರ್ವಾದ ಮಾತ್ರ ಸದಾ ನನ್ನ ಜೋತೆಗಿರುತ್ತೆ. ಆ ಮೂಲಕ ಸದಾ ನೀನು ನನ್ನ ಜೋತೆಗಿರ್ತೀಯ. ಒಂದಲ್ಲ ಒಂದಿನ ನನ್ನ ಮಗ ಏನಾದ್ರೂ ಸಾದಿಸ್ತಾನೆ ಅನ್ನೋ ನಂಬಿಕೆಯಲ್ಲಿ ದಿನಗಳನ್ನ ಕಳೀತ ನನ್ನ ಕಾಯ್ತಾ ಇದೀಯ, ನಿನ್ನ ನಂಬಿಕೇನ ಆದಷ್ಟು ಬೇಗ ನಿಜ ಮಾಡ್ತೀನಿ. ಆ ದಿಸೆಯಲ್ಲಿ ಹೋರಾಡ್ತಾ ಇದೀನಿ.
ಸದಾ ನನ್ನ ಬಗ್ಗೆನೇ ತುಡಿಯೋ ನಿನ್ನ ಪ್ರೀತಿಗೆ, ನಿನ್ನ ಮಮತೆಗೆ ಸಮವಾಗೋದನ್ನ ನನ್ನಿಂದ ಈ ಜನ್ಮದಲ್ಲಿ ನೀಡಲು ಸಾದ್ಯವಿಲ್ಲ.
ನೀ ಕೊಟ್ಟ ಈ ಜೀವದ , ಜೀವನದ ಋಣವ ಈ ಜನ್ಮವಲ್ಲ, ಏಳೇಳು ಜನ್ಮದಲ್ಲೂ ತೀರಿಸೋಕೆ ಸಾದ್ಯವಿಲ್ಲ ....
ಇನ್ನು ಹೆಚ್ಚೇನೂ ಹೇಳಲ್ಲ ,
"ಬರಿದೆ ದೇಹ ನಾನು
ಅದರ ಜೀವ ನೀನು"
ಅಮ್ಮಾ HAPPY MOTHERS DAY ............... ಪ್ರತಿ ವರ್ಷದಂತೆ ಈ ವರ್ಷಕ್ಕೆ ಈ ಕವಿತೆಯ ಅರ್ಪಣೆ , ಪ್ರತೀ ವರ್ಷ ಗ್ರೀಟಿಂಗ್ ಕಾರ್ಡ್ ನಲ್ಲಿ ಕವಿತೆ ಬರದು ನೇರವಾಗಿ ಕೊಡ್ತಿದ್ದೆ, ಓದೋಕೆ ಬರದ ನೀ, ಮನಸಿನಲ್ಲಿ
ಓದಿಕೊಂಡು ಕಂಬನಿ ಮಿಡಿಯುತ್ತಿದ್ದೆ . ಈ ಬಾರಿ ನೇರವಾಗಿ ನೀಡಲು ಆಗುತ್ತಿಲ್ಲ ಕ್ಷಮಿಸು..... ಅಂತ ನಾನ್ ಕೇಳ್ಬೇಕ? ಮೊದಲೇ ಕ್ಷಮಯಾಧರಿತ್ರಿ ನೀ .... love u forever.......
ತಾಯಿ ಪ್ರೀತಿಯ ಸಾರಲು ಬಂತು ಮದರ್ಸ್ ಡೇ |
ತಾಯಿ ಪ್ರೀತಿಯ ಹಾಳವನ್ನು
ತಿಳಿದೋರಿಲ್ಲ, ತಿಳಿಯಲಾಗೋದಿಲ್ಲ
ತಾಯಿ ಮಮತೆಯ ಹೆತ್ತರವನ್ನು
ಹತ್ತಿದವರಿಲ್ಲ, ಹತ್ತಲಾಗೋದಿಲ್ಲ
ಅವಳೊಂದು ಪ್ರೀತಿಯ ಎವರೆಸ್ಟೂ
ಎಂದೆಂದೂ ನಮ್ಮಾ ಹೃದಯಕೆ ನಿಯರೆಸ್ಟೂ || ತಾಯಿ ||
ಮೊದಮೊದಲು ಭೂಮಿಗೆ ಬಂದಳು
ಜೊತೆಯಲ್ಲೇ ಮಮತೆಯ ತಂದಳು
ಧರೆಬೆಳಗೋ ದೀಪವ ಹಚ್ಚಿ
ಆರದಂತೆ ಕಾದು ಕುಳಿತಳು
ಅವಳೆಂದೂ ನಮ್ಮಾ ಬಾಳಿಗೆ ಡಿಯರೆಸ್ಟೂ
ಅವಳೆದುರು ಉಳಿದೋರೆಲ್ಲ ಫಾರೆಸ್ಟೂ || ತಾಯಿ ||
ತೊದತೊದಲು ಮಾತನು ತಂದಳು
ತಾಹಸಿವಿದ್ದು ತುತ್ತನು ಕೊಟ್ಟಳು
ನೋವೆಲ್ಲಾ ಒಬ್ಬಳೇ ಉಂಡು
ಖುಶಿಹಂಚಿ ನೋವ ಮರೆತಳು
ಪ್ರತಿಯೊಬ್ಬರ ಪ್ರೀತಿ ತುಂಬಾ ಶಾರ್ಟೆಸ್ಟೂ
ಅಮ್ಮನೊಬ್ಬಳ ಪ್ರೀತಿ ತುಂಬಾ ಲಾಂಗೆಸ್ಟೂ || ತಾಯಿ ||
---- ಅರಶಿ


