Friday, December 24, 2010

ನನ್ನ facebook ಗೆಳೆಯ jaikanthಗೊಂದು ಕವಿತೆ..!


ನನ್ನ facebook ಗೆಳೆಯ jaikanth ಕೆಲವು ದಿನಗಳ ಹಿಂದೆ ತನಗೊಂದು ಕವಿತೆ ಬರೆದು ಕೊಡಲು ಮನವಿ ಮಾಡಿದ..ಸುಮಾರು ಏಳು ವರ್ಷಗಳಿಂದ ಶ್ರುತಿ ಎಂಬ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ.. ಆ ಹುಡುಗಿ ಅವನ ಪವಿತ್ರ ಪ್ರೀತಿಯನ್ನು ಕಡೆಗಣಿಸುತ್ತಿರುವುದಾಗಿ ತಿಳಿಸಿದ.. ಆ ಹುಡುಗಿ ಅವನನ್ನು ನಿರ್ಲಕ್ಷಿಸಿದರು ಏಳು ವರ್ಷಗಳಿಂದ ಒಂದಲ್ಲ ಒಂದು ದಿನ ಅವಳ ಪ್ರೀತಿಯನ್ನು ಪಡೆಯುವೆ ಎಂಬ ನಂಬಿಕೆಯಲ್ಲಿ ಕಾಯುತ್ತಿರುವ.. ಗೆಳೆಯನ ಪ್ರೀತಿಯ ಮೇಲೆ ಹೆಮ್ಮೆ ಅನಿಸಿತು.. ನನ್ನ ಈ ಸಾದಾರಣ ಕವಿತೆ ಅವನ ಪ್ರೀತಿಗೆ ನೆರವಾದರೆ ನಾ ದನ್ಯ.. jaikant ನಿನ್ನ ಪ್ರೀತಿ ನಿಜವಾಗಿದ್ದರೆ ಖಂಡಿತ ಶ್ರುತಿಯ ಪ್ರೀತಿ ನಿನಗೆ ದಕ್ಕುತ್ತದೆ.. ಒಳ್ಳೆಯದಾಗಲಿ ಗೆಳೆಯ..   -ಅರಶಿ

ರಾಗವಿರದೆ...

ಅಂತರಂಗದುಸಿರಲಿ
ಕೇವಲ ನಿನ್ನ ಹೆಸರಿದೆ
ಅಂತಃಪುರದ ಮನಸಲಿ
ಒಲವಿಗೆ ಅಂತ್ಯವೆಲ್ಲಿದೆ
ನನ್ನ ಉಳಿವೋ ಸಾವೋ
ನೀನೇಳೋ ಒಂದು ಮಾತಲ್ಲಿದೆ
    ನಿನ್ನೆದುರು ಸೋತರೆ
    ಈ ಜಗವನೆ ಗೆಲ್ಲುವೆ
    ನಿನ್ನ ಮೌನ ಮುರಿಯದೆ
    ಸೋಲು ಬಿಟ್ಟು ತೊಲಗದೆ
ಬಂದೊಮ್ಮೆ ಗೆದ್ದು, ನನ್ನ ಸೋಲಿಸಿ.. ಗೆಲ್ಲಿಸು....

ರಾಗವಿದ್ದೂ...


ಮುಳುಗುವ ಕನಸಿಗೆ 
ಬಾ ಈಜಲು ಕಲಿಸು
ಮರಗುವ ಮನಸಿಗೆ
ನಿನ್ನ ಮನಸನು ತಿಳಿಸು
ಜೀವ ಸಿಲುಕಿದೆ ಮುಳ್ಳಿಗೆ
ಬಾ ನನ್ನ ಉಳಿಸು
        ಏಳು ವರ್ಷವೋ ಏಳು ಜನ್ಮವೋ
        ನಿನ್ನೆ ಕಾಯುವೆ ನಿನ್ನೆ ಬೇಡುವೆ
        ನೆನ್ನೆ ಜನನವೋ, ನಾಳೆ ಮರಣವೋ
        ನೀನೆ ನೆನ್ನೆಯು, ನೀನೆ ನಾಳೆಯು
ಈ ಜಗವೇ ನನಗೆ ನರಕವಿಲ್ಲೀ
ನಿನ್ನ ಮೌನ ಕೊಲುತ್ತಿರಲು
ಇದೇ ಜಗವೇ ಸ್ವರ್ಗವಿಲ್ಲೀ
ನಿನ್ನ ಮಾತು ನಗುತ್ತಿರಲು |

ಪ್ರತಿ ದಿನ ತಿರುವುವೆ
ನೆನಪಿನ ಪುಟವಾ
ಪ್ರತಿಕ್ಷಣ ಕಾಡುವೆ
ಬಿಡದಲೇ ಹಟವಾ
ಗೋತ ಹೊಡೆವ ಮುನ್ನ ಉಳಿಸು
ನನ್ನ ಎದೆಯ ಗಾಳಿಪಟವಾ
ಸೂತ್ರ ನೀನು, ಪಾತ್ರ ನಾನು
ಜತೆಬರಲು ನೀನು, ಬೇಡ ಏನು
              ನೀನಾಡದ ಮಾತಿಗೆ ನನದೊಂದು ಕೋರಿಕೆ
ನುಡಿಯುತ ಸೂಚನೆ ನೀಡುತ ಹೋಗು
ನಾ ಬರೆಯುವ ಕವಿತೆಯ ಪ್ರತಿ ಸಾಲಾಗು ||


ಇನ್ನು ಜನಿಸದ ಬ್ರೂಣಕೆ
ಎಂದು ನೀಡುವೆ ಜನನ
ನಿನ್ನೆ ಜಪಿಸುವ ಪ್ರಾಣಕೆ
ಹೇಳು ತರವೇ ಮರಣ
ಕನಿಕರ ತೋರದೆ ಕರುಣಿಸು ಬಾರೆ
ಒಲವಿನ ಇರುವಿಕೆ ಜಗತ್ತಿಗೆ ತೋರೆ
ಉಸಿರೋಗೋ ಮುನ್ನ, ಕೂಗೊಮ್ಮೆ ನನ್ನ
ಮಡಿಯುವ ಖುಷಿಗೆ, ನಿನ್ನೊಲವೆ ತಾಣ
               ನೀನಾಡುವ ಮಾತಿಗೆ ಇನ್ನಿಲ್ಲ ಹೋಲಿಕೆ
ಕಡೆಗಣಿಸುತ ಹಾಗೆ ನಿಂತೊಮ್ಮೆ ಸಾಗು
ನಾ ನುಡಿಸುವ ರಾಗಕೆ ಬಾ ಶ್ರುತಿಯಾಗು ||
                                                                     -ಅರಶಿ
 

Thursday, December 16, 2010

facebook ಗೆಳತಿಗೊಂದು.. faceless ಕವಿತೆ.....

ಹೊದ್ಕಳೋ ಬೆಡ್ ಶಿಟ್ ಕತ್ತಲ್ಲಿ...

ನೋಡುತಾ ಕುಸಿದುಬಿದ್ದೆ ಮತ್ತಲ್ಲಿ

ಮಹಿಷಾಸುರ ನಾಚುವ ನಗು...
...
ನಿನಗೆ ನೀನೆ ಸಾಟಿ ಹೋಗು..

chrismass ತಾತನಿಂದ ಕದ್ದ ಕಲರ್ ಕಲರ್ ಟೋಪಿ..

ನೋಡುತಾ ಕುಡಿದೆ ಗಟ ಗಟ ಕಾಫಿ

ಒಮ್ಮೆ ಸೋಡಾಬುಡ್ಡಿ

ಒಮ್ಮೆ ಬೀಡಾಬುಡ್ಡಿ...

ಲುಕ್ಕು ಒಮ್ಮೆ ರಣ ಹದ್ದುಗಳ ಕರೆಯಲು ಆಕಾಶಕ್ಕೆ ..

ಒಮ್ಮೆ ಗೆದ್ದಲು ಹುಳುಗಳ ಸೆಳೆಯಲು ಪಾತಾಳಕ್ಕೆ..

ಒಮ್ಮೆ ನೋಡುವವರ ಪೀಡಿಸಲು ನೇರ ನೇರಕ್ಕೆ..

ಗೋಡೆ ಗುದ್ದುವ ಅವ್ಯಾಸ ಹುಟ್ಟಿನಿಂದಲೇ ಬಂದಿರಬಹುದೇನೋ...

ನಿಮ್ಮಿಂದ ಮನುಷ್ಯರಿಗೆ 32 ಹಲ್ಲುಗಳೆ೦ಬುದು ಋಜುವಾಯ್ತು..

ಬಿಳಿ ಸ್ವೆಟ್ರು ಆ ಲುಕ್ಕಿಗಿಂತ ಬೆಟ್ರು..

ಕೆಲವು ಚಿತ್ರಗಳಲ್ಲಿ ಬಹುಶ ಕುಡಿದಿರಬಹುದು ಕ್ವಾಟ್ರು..

black & white ಫೋಟೋ ದಲ್ಲಿ.. ಬಾಯ್ ಮುಚ್ಕೊಂಡ್ ಏನ್ ತಿಂತಾ ಇದ್ದೀಯ ಕಳ್ಳಿ..?

ಚಕ್ಲಿ ನಿಪ್ಪಟ್ಟ..! ನಮಗಿಲ್ವಾ..?

ಕೇಶ ರಾಶಿಯಂತು ಅದ್ಬುತ..

ನೋಡಿದರೆ ಸ್ವರ್ಗದಿಂದ ಜಾರಿಯಾನು ಮನ್ಮತ..

ಅಕ್ಕಮಹಾದೇವಿ ಇವಾಗಿಲ್ಲ ಪಾಪ..

ಗೋಲಿ ಕಣ್ಗಳು.. ಆ ಮನಮೋಹಕ ನಗುವೋ ಅದೇ ತಂಗ್ಳು...

lipstic ರಂಗೋ.. ರಾಂಗೋ.. ನೋಡಿದವ ಬಲ್ಲ..

ಸ್ವಲ್ಪ ಎಚ್ಚರವಹಿಸು ಎದರಿಕೊಂಡಾನು ನಿನ್ನ ನಲ್ಲ..

ಉತ್ಪ್ರೇಕ್ಷೆಯಲ್ಲ ನಿನ್ನಂತ ಸುಂದರಿ ಧರೆಯಲಿಲ್ಲ..

ಮೋಡಗಳು ನಕ್ಕು ಅಳುವ ಮುನ್ನ

ಕರಗಿಹೋಗಬಹುದೇನೋ ಗೆಳತಿ.. ಒಮ್ಮೆ ನಕ್ಕು ಮುಚ್ಚಿಕೋ ನನ್ನ ಕವಿತೆಯಲಿ....
                                                                                                                                                                   -ಅರಶಿ

Friday, October 22, 2010

ಎಲ್ಲಾ ನಿನದೆ, ನನದೇನಿಲ್ಲ...

 
 
 
 
 
 
 
 
 
 
 
 
 
 
 
 
 
 
 
 
ಎಲ್ಲಾ ನಿನದೆ, ನನದೇನಿಲ್ಲ
ಎಲ್ಲಾ ನೀನೆ, ನಾನೇನಿಲ್ಲ
ನನ್ನ ಕನಸು ನಿನದೆ 
ನನ್ನ ಮನಸು ನಿನದೆ 
ನನ್ನ ಮೌನ ನಿನದೆ 
ನನ್ನ ಮಾತು ನಿನದೆ 
     ಎಲ್ಲಾ ನಿನದೆ ನನದೇನಿಲ್ಲ
     ನಾ ಬರಿದೇ ದೇಹವು, ನೀನದರ ಜೀವವು  
     ಎಲ್ಲಾ ನೀನೆ, ನಾನೇನಿಲ್ಲ
     ನಾ ಬರಿದೇ ರಾಗವು, ನೀನದರ ಭಾವವು |
 
ಮುಸ್ಸಂಜೆಯ ಬಾನಿನ ಬನಕೆ
ನೀಡಿದ, ರಂಗೂ ನಿನದೆ
ಆಕಾಶದ ತಾರೆಗಳ ಬಣಕೆ
ಕಾಡಿದ, ಗುಂಗೂ ನಿನದೆ
     ನಾ ಕಣ್ಮುಚ್ಚಿ ಕಾಣುವ
     ಊಹಲೋಕವೆಲ್ಲ ನಿನದೆ
     ನಾ ಮನದಿ ಬಾಳುವ
     ಭಾವಲೋಕವೆಲ್ಲ ನಿನದೆ
ನನ್ನ ಹೊಳಪು ನಿನದೆ, ನನ್ನ ನೆನಪು ನಿನದೆ
ಎಲ್ಲಾ ನಿನದೆ, ನನದೇನಿಲ್ಲ
ನಾ ಬರಿದೇ ಮೂರ್ತಿಯು, ನೀನದರ ಕೀರ್ತಿಯು ||
 
ಈ ಧರೆಯ ಹೂಗಳು ಕೂಡ
ಬೇಡಿದ, ಗಂಧವು ನಿನದೆ
ಬಾನಿನ ಚಂದಿರ ಕೂಡ
ಕೇಳಿದ, ಅಂಧವು ನಿನದೆ
     ನಾ ಕಣ್ತೆರೆದು, ನೋಡುವ
     ಆಶಲೋಕವೆಲ್ಲ ನಿನದೆ
     ನಾ ಮನಸಾರೆ ಕೇಳುವ
     ಸ್ವರಲೋಕವೆಲ್ಲ ನಿನದೆ
ನನ್ನ ಬೆಳಕು ನಿನದೆ, ನನ್ನ ಬದುಕು ನಿನದೆ
ಎಲ್ಲಾ ನಿನದೆ ನನದೇನಿಲ್ಲ
ನಾ ಬರಿದೇ ಹೆಜ್ಜೆಯೂ, ನೀನದರ ದಾರಿಯು ||
                                                                   -ಅರಶಿ

Wednesday, October 20, 2010

ನೀನೆ ಕಾರಣ............|

 
 
 
 
 
 
 
 
 
 
 
 
 
ಮನಸು ಬರುಡಾದ ಜನರ ಮರೆತು
ಬಾ ಹೊಸ ಕನಸು ಕಾಣುವ 
ಕಣ್ಣು ಕುರುಡಾದ ಜಗವ ಮರೆತು
ಕಣ್ಣು ಮುಚ್ಚಿ ನಡೆಯುವ 
    ಅರಳಿದೆ ಬಾಡಿಹೋದ ನನ್ನೆದೆ 
    ಅದಕೆ ನೀನೆ ಕಾರಣ............|
 
ಓದಬೇಡ ಯಾವ ಪತ್ರಿಕೆಯ 
ಕೊಲೆ, ಸುಲಿಗೆ, ಮೋಸ, ವಂಚನೆ 
ಬರೀ ರಾಜಕಾರಣ,
ಓದು ಬಾ ನನ್ನೆದೆಯ 
ಬರೆದಿರುವೆ ನವಿರಾದ ಕವನವ 
ಅದಕೆ ನೀನೆ ಕಾರಣ............||
 
ಹಾಡಬೇಡ ಈ ಲೋಕದಲಿ
ಇಲ್ಲಿ ಯಾರು ಕೇಳರು
ಮನದಿ ಬರೀ ಹಗೆಯ ತೋರಣ,
ಹಾಡು ಬಾ ನನ್ನೆದೆಯಲಿ
ವಿಶಾಲವಾಗಿ ಅರಡಿಹುದು
ಅದಕೆ ನೀನೆ ಕಾರಣ............||
                                          -ಅರಶಿ

ಗೆಳತಿ ಜಗವು ಪ್ರೀತಿ ಮರೆತಿದೆ...!!!!

 
 
 
 
 
 
 
 
 
 
 
 
 
 
 
ಅತ್ತ ಕೊಲೆ, ಇತ್ತ ಸುಲಿಗೆ 
ಅತ್ತ ಲಂಚ, ಇತ್ತ ಹಗರಣ 
ಅತ್ತ ಕೊಳಕು, ಇತ್ತ ಮೋರಿ ನೀರ ಬಳುಕು
ಅದರ ನಡುವೆ ಬಡವರಾ.... ಬದುಕು
ಗೆಳತಿ ಜಗವು ಪ್ರೀತಿ ಮರೆತಿದೆ 
ನಾನು ನೀನು ಜತೆಗೂಡಿ 
ಮರೆತ ಪ್ರೀತಿಯ ಜಗಕೆ ಜ್ಞಾಪಿಸುವ |
 
ಹಣದ ಮೋಹ ಮಿತಿಮೀರಿ 
ಜನರ ಸ್ವಾರ್ಥ ಮೀರಿದೆ 
ಇನ್ನೂ ಬೇಕೆಂಬ ಆಸೆ ಎಲ್ಲೆಮೀರಿ 
ಜಗದಿ ಮಾನವೀಯತೆ ಮರೆಯಾಗಿದೆ ||
 
ಅಸಹಾಯಕ ಬಡವರ ಬೆನ್ನನೇರಿ
ಸಿರಿವಂತರು ಮಹಡಿ ಮೇಲೆ ಕೂತಿಹರು 
ದುರ್ಬಲರನ್ನು ತುಳಿದುಕೊಂಡು 
ಮುಂದೆ ಮುಂದೆ ಸಾಗುತಿಹರು ||
 
ನಾನು ನನ್ನದು ಎಂಬ ಸ್ವಾರ್ಥದಿ 
ನೊಂದ ಜನರು ಮೂಕ ಶೋಕದಿ 
ಗೆಳತಿ ಜಗವು ಪ್ರೀತಿ ಮರೆತಿದೆ  
ನಾನು ನೀನು ಜತೆಗೂಡಿ 
ಮರೆತ ಪ್ರೀತಿಯ ಜಗಕೆ ಜ್ಞಾಪಿಸುವ ||
 
                                   -ಅರಶಿ
 
 

Tuesday, October 19, 2010

ಅನುಪಮ





















ಒಂದು ಸುಂದರ ಮುಂಜಾನೆ
ಗೆಳತಿ ನಿನಗೆಂದೇ ಮೂಡುವುದು 
ನಿನ್ನ ಎಲ್ಲಾ ಕನಸುಗಳಾ
ಗೆಳತಿ ಅದು ನನಸು ಮಾಡುವುದು 
        ನಾಳೆ ಇದೆ ನಿನಗೆಂದು 
        ದೃತಿಗೆಡದೆ ನಡೆ ನೀನೆಂದು 
        ನಿನ್ನ ಹಾಡಿಗೆ ಎಂದು ನೀನೆ ಸರಿಗಮ 
        ನಿನ್ನ ನಿಲುವಿಗೆ  ಎಂದು ನೀನೆ ಅನುಪಮ | 

ಎನಿತು ಚಂದ ನೀ, ಒಳಗಣ್ಣಿನಿಂದ
ಒಮ್ಮೆ ನೋಡಿಕೋ ಮನಸಿನ ಕನ್ನಡಿ
ನೆನ್ನೆಯ ವ್ಯಥೆ ಮರೆತು, ನಾಳಿನ ಹೊಸ ಕಥೆಗೆ
ನೀನೆ ಬರೆದುಕೋ ಒಂದು, ಸುಂದರ ಮುನ್ನುಡಿ
        ಯಾರು ಮಾಡರು ನಿನ್ನ ವ್ಯಥೆಯ ಅನುವಾದ
        ನೀನೆ ಮಾಡಿಕೊ ನಿನ್ನ ಕಥೆಯ ಭಾವಾನುವಾದ
        ನೋವಿಗೆ ಕುಗ್ಗದಿರು, ಸೋಲಿಗೆ ಸೊರಗದಿರು
        ನಿನ್ನ ಛಲವನು ಹಿಡಿದು, ಗೆಳತಿ.. ನುಗ್ಗುತ್ತಿರು.. ಮುನ್ನುಗ್ಗುತ್ತಿರು... ||

ಒಮ್ಮೆ ಆಲಿಸಿ ನೀ, ನಿನ್ನನೆ ಕೇಳು
ಜೀವನವೆಂದರೆ ಎಂದು ಏಳು ಬೀಳು
ಆಸರೆಯಾಗಿ ಬರದಿರೆಯೇನು ಯಾರ ತೋಳು
ನಿನಗಾಗಿ ನಿನಗಿದೆ ನಿನದೆ ಬಾಳು
       ಬರಿ ಮಾತಿನ ಲೋಕವಿದು
       ಮಾತಲ್ಲೇ ಕೊಳ್ಳುವ ನಾಖವಿದು
       ಹೆದರಿಕೆಗೆ ಅಂಜದಿರು, ಅಡೆತಡೆಗೆ ಅಳುಕದಿರು
       ಯಾರ ಹಿಡಿತಕು ಸಿಗದೇ ಗೆಳತಿ, ಸಾಗುತ್ತಿರು.. ಮುಂದೆಸಾಗುತ್ತಿರು.. ||
                                                                                                                                                                                      -ಅರಶಿ

ಮಣ್ಣಿಂದ ಬರ್ತೀವಿ .....
















ಮಣ್ಣಿಂದ ಬರ್ತೀವಿ
ಮತ್ತೆ ಮಣ್ಣೀಗೆ ಹೋಗ್ತೀವಿ
ಎಲ್ಲಿಂದ ಶುರು ಮಾಡ್ತೀವಿ
ಮತ್ತೆ ಅಲ್ಬಂದೆ ನಿಲ್ತೀವಿ
      ಬಲ್ಲಿದನಾದರೇನು ಬಲ
      ಬಡವನಾದರೇನು ಕುಲ
      ನಾನು ನೀನು ಹೊಟ್ಟೆಗೆ
      ತಿನ್ನೋದ್ ಅನ್ನಾನೆ
      ನನಲು ನಿನಲು ಅರಿವ ರಕ್ತ
      ಹೇಳು ಬೇರೇನೆ
ನನಗೆ ಬಂದದ್ದು ನನಗೆ ಕಣೋ
ನಿನಗೆ  ಬಂದದ್ದು ನಿನಗೆ  ಕಣೋ
ಕಿತ್ತೂ ತಿನ್ನೋದ್ ಬೇಡ ಕಣೋ
ಅತಿ ಆಸೆ ಪಡೋಣ್ ಮೂಡ ಕಣೋ |

ಎಲ್ಲ ಅರಿವ ಬುದ್ದಿ ಜೀವಿ
ಮೂಡನಾದನು
ತನ್ನ ಸುತ್ತ ಮೌಡ್ಯದಿಂದ
ಗೋಡೆ ಬಿಗಿದನು
     ಎಲ್ಲ ನಾನೇ ಎನ್ನುವ ಅಹಂಕಾರದಿ 
     ಎಲ್ಲ ನನ್ನಿಂದ್ಲೆ ಎನ್ನುವ ಹಾಹಕಾರದಿ 
     ಮಾನವೀಯತೆ ಮರೆತುಬಿಟ್ಟು 
     ಸ್ವಾರ್ತಿಯಾದನು, ಪ್ರೀತಿ ಮರೆತನು ||ನನಗೆ||

ಪರರ ವಿಕಾಸವನ್ನು ಕಂಡು 
ಅಸೂಯೆ ಏತಕೆ 
ಜನರ ಎದುರು ವರ್ಚಸ್ಸು 
ತೋರೋ ನೆಪಮಾತ್ರಕೆ 
     ಮಾನವನಾದರೇನು ಪಲ
     ಪರೋಪಕಾರ ಮರೆತರೆ 
     ಜಗದ ಅಷ್ಟೂ ಜೀವಜಲ 
     ಕ್ರೂರರಾದರೆ, ಒಮ್ಮೆಲೆ ಪ್ರಳಯ ಈ ಧರೆ  ||ನನಗೆ||
                                                                
                                                                       -ಅರಶಿ  

ಇನ್ನೊಂದೇ ಒಂದು ಜನ್ಮ ...!















ಬದುಕಿದ ಇಹದಲು ನೀನೆ 
ಉಸಿರಳಿದ ಪರದಲು ನೀನೆ
ಈಗಿರುವ ಜನುಮವು ನೀನೆ
ಮುಂಬರುವ ಜನುಮವು ನೀನೆ 
ನೀನೆ, ನೀನೆ, ನೀನೆ, ನೀನೆ, 
ನಿನಗಾಗಿ ಬದಲಾಗಿ ಹೋದೆ ನಾನೆ.||ಪ||

ಮರುಜನ್ಮಕೆ ಮನವಿಯ ಮಾಡುವೆ
ಹೊಸಜನ್ಮವ, ಬಿಡದೆ ಕೇಳಿ ಪಡೆಯುವೆ
ಮತ್ತೆ ನಿನ್ನ ಹುಡುಕುವೆ
ಹುಡುಕಿ ನಿನ್ನನು ಸೇರುವೆ
       ಈ ಜನ್ಮದ ಸಾವು, ನಿನ್ನ ನೆನಪೊಂದಿಗೆ
       ಮರುಜನ್ಮದ ಹುಟ್ಟು ಅದು ನಿನ್ನೊಂದಿಗೆ
ಇನ್ನೊಂದೇ ಒಂದು ಜನ್ಮ 
ನನಗಾಗಿ ಕರುಣಿಸು ಬ್ರಹ್ಮ ||

ಪದಕೆ ಪದಗಳ ಗುಣಿಸುವೆ
ಕವಿತೆಗಳ ಶಿಖರವ ಏರುವೆ
ದಿನವು, ತಪ್ಪದೆ ಕನಸಲಿ ನೋಡುವೆ
ಕ್ಷಣವೂ, ಹಗಲದೆ ನೆನಪಲಿ ಬಾಳುವೆ
      ಈ ಜನ್ಮಕೆ ಇಷ್ಟೇ ಸಾಕು
      ಮರುಜನ್ಮಕೆ ಬಾಕಿ ಉಳಿಸಬೇಕು
ಇನ್ನೊಂದೇ ಒಂದು ಜನ್ಮ 
ನನಗಾಗಿ ಕರುಣಿಸು ಬ್ರಹ್ಮ ||
                                                      -ಅರಶಿ




















ಸಾಲದು ಈ ಜನುಮ
ನಿನ್ನ ಪೂಜಿಸಲು ಅಮ್ಮ
ಬೇಕಿದೆ ಮರುಜನುಮ
ನಿನ್ನ ಋಣ ತೀರಿಸಲು ಅಮ್ಮ
          ನೀನೆ ಕೊಟ್ಟ ಜೀವನ
          ನಿನಗಾಗೆ ಮುಡಿಪಿಟ್ಟರೇನು?
          ನೀನೆ ಕೊಟ್ಟ ಪ್ರಾಣ
          ನಿನಗಾಗೆ ಹೋದರೇನು? ||ಪ||

ಘಳಿಗೆ ಮರೆಯಾದರು
ಬಂದೆ ನನ್ನ ಹುಡುಕುತ
ಘಂಟೆ ಎಷ್ಟಾದರೂ
ಕುಳಿತೆ ನನಗೆಂದೆ ಕಾಯುತ
       ನಾ ಅತ್ತರೆ, ನೋವಲೀ ಬೇಯುತ
       ನಾ ನಕ್ಕರೆ, ನನ್ನ ನಗುವಲೀ ಬೆರೆಯುತ
ನಿಜ ಹೇಳಲೇ, ಈ ಧರೆಯೆ ಶೂನ್ಯ
ನಿನ್ನ ಪೂಜೆಯಲ್ಲೇ, ಅಮ್ಮ ಈ ಜನುಮ ಧನ್ಯ ||

ನನಗೆ ತುಸು ನೋವಾದರು
ನಿನ್ನ ಕಣ್ಣಲೀ ಕಂಬನಿ ಅನಿಸುತ
ನಿನಗೆ ಏನಾದರು
ನನಗೆ ತೋರದೆ ಮರೆಸುತ
        ನಾ ಸತ್ತರೆ, ಸಾವೆನು, ಮರು ಜನ್ಮವಾ ಬೇಡುತ
        ನಿನ್ನಕ್ಕರೆ, ಮಡಿಲಲೀ ಮತ್ತೆ ಹುಟ್ಟಲು ಜಪಿಸುತ
ಒಂದು ಸತ್ಯ ಹೇಳಲೇ, ಈ ಜಗದಲಿ ನೀನೆ ಮಾನ್ಯ
ನಿನ್ನ ಮಗನಾದುದೆ, ನನ್ನ ಪೂರ್ವಜನ್ಮದ ಪುಣ್ಯ ||
                                        
                                                                          -ಅರಶಿ

 


Thursday, October 7, 2010

ಮತ್ತೆ ಮತ್ತೆ ಅನಿಸುತ್ತಿದೆ..!














ಮತ್ತೆ ಮತ್ತೆ ಅನಿಸುತ್ತಿದೆ
ಊಹಲೋಕ ತೆರೆಯುತ್ತಿದೆ 
ನಾನು ನಿನ್ನೊಂದಿಗೆ 
ನೀನು ನನ್ನೊಂದಿಗೆ 
ಇರುವಂತ ಭಾಸ ಭ್ರಮಿಸುತ್ತಿದೆ 
ಇನ್ನು ಅನಿಸುತ್ತಿದೆ... ತುಂಬಾ ಅನಿಸುತ್ತಿದೆ..
ಮತ್ತೆ ಮತ್ತೆ ಅನಿಸುತ್ತಿದೆ 
ಇಹಲೋಕ ಮರೆಯುತ್ತಿದೆ ||ನಾನು||

ಆ ಬನಾಂಗಳ, ಈಗ ಬರಿದಾಗಿದೆ 
ನೀನು ಎಲ್ಲಿರುವೆ ಎಂದು ಹುಡುಕುತ್ತಿದೆ 
ಈ ಮನದಾಂಗಳ ಈಗ ಹೊಸದಾಗಿದೆ 
ನಿನ್ನ ಪಾದಾರ್ಪಣೆಯಾಗಲು ಅರಸುತ್ತಿದೆ 
          ನಾನಾ ಬಗೆಯ ಬಣ್ಣದಲಿ 
          ಒಲವಿನುಡುಗೊರೆ, ಸಿಂಗರಿಸಿ
          ತೆರೆದ ಎದೆಯ ಚಿಪ್ಪಿನಲ್ಲಿ
          ನಿನ್ನ ನೆನಪ ಅಲಂಕರಿಸಿ
ನಿನ್ನ ನಾ ನೋಡಲು
ನೋಡಿ ಮಾತಾಡಲು
ಜೊತೆ ಓಡಾಡಲು
ಎದೆ ಹಾಡಾಗಲು
ನನ್ನ ಈ ಜೀವ ಬದುಕುತ್ತಿದೆ
ಇನ್ನು ಅನಿಸುತ್ತಿದೆ... ತುಂಬಾ ಅನಿಸುತ್ತಿದೆ..||ಮತ್ತೆ ಮತ್ತೆ||

ಆ ಮಳೆಮೋಡದಿ ಈಗ ಸದ್ದಾಗಿದೆ
ಹನಿ ನಿನ್ನ ಮೈಸೋಕಿಮೈಮರೆಯಲು ಇಳಿಯುತ್ತಿದೆ
ನನ್ನ ಈ ಪ್ರಾಣದಿ ಈಗ ಸದ್ದೋಗಿದೆ
ನಿನ್ನ ಉಸಿರಿಡಿದು ಜೀವಪಡೆಯಲು ಅಲೆಯುತ್ತಿದೆ
          ಹಿಂದೆಂದೋ ಆವುದೋ ಜನ್ಮದಲ್ಲಿ
          ನಿನ್ನೊಡನೆ ಕೂಡಿ ಬಾಳಿದಂತೆ
          ಇಲ್ಲೆಲ್ಲೋ ನಿಂತು ಪ್ರೀತಿಯಲ್ಲಿ
          ನಿನನ್ನಾ  ಕೂಗಿ ಕರೆದಂತೆ
ಏನೋ ನೀನೀಡಲು
ನಾನು ಮೈಮರೆಯಲು
ಮತ್ತೆ ನಾ ಕೇಳಲು
ನೀನಾಚಿ ಓಡೋಗಲು
ನನ್ನ ಈ ಭಾವ ಅರಳುತ್ತಿದೆ
ಇನ್ನು ಅನಿಸುತ್ತಿದೆ... ತುಂಬಾ ಅನಿಸುತ್ತಿದೆ..||ಮತ್ತೆ ಮತ್ತೆ||
                                                                               -ಅರಶಿ
 

Sunday, October 3, 2010

ನಾ ಬರೆದ ಕವಿತೆಗಳು...













ನಾ ಬರೆದ ಕವಿತೆಗಳು,
ಅರ್ಥವಿದ್ದರು ಅರ್ಥಗೆಟ್ಟ ಪದಗಳು
ಮುಂದೆ ಬರೆವ ಆಲೋಚನೆಗಳು
ಕವಿದ ಕಾರ್ಮೋಡಗಳು
ದಾರಿ ಕಾಣದ ತಿರುವುಗಳು
ಚಲಿಸದೆ ನಿಂತ ಪಾದಗಳು
ಎಲ್ಲೋ ಕೇಳುವ ದನಿಗಳು
ಸ್ಪಷ್ಟವಿಲ್ಲದ ಮಾತುಗಳು
ಕತ್ತಲಲ್ಲಿ ಮೂಡುವ ಭಾವನೆಗಳು
ಬರೆಯಲು ಕ್ಯಕೊಟ್ಟ ಇಂಕ್ ಮುಗಿದ ಪೆನ್ನುಗಳು
ಬರೆಯದೆ ಮರೆತ ಎಷ್ಟೋ ಸಾಲುಗಳು
ಪ್ರತಿ ಸಾಲಿನಲ್ಲಿ ಇಣುಕಲು ಯತ್ನಿಸಿ ಸೋತ ನೆನಪುಗಳು
ಸ್ಪೂರ್ತಿ ಇಲ್ಲದೆ ಸೋತ ಕವನಗಳು
ಏನೋ ನೆನೆದು ಮತ್ತೇನೋ ಬರೆದ ಬೆರಳುಗಳು
ಪದಗಳ ಅರಸಿ ಸದಾ ಹಾರಾಡುವ ಖಾಲಿ ಹಾಳೆಗಳು
ಸಪ್ತ ಸಾಗರದಾಚೆ ಇಣುಕುವ ಸುಪ್ತ ಮನಸುಗಳು
ನನಸಾಗದ ಎಷ್ಟೋ ಕನಸುಗಳು
ಎಲ್ಲ ಬರಿ ಕನಸುಗಳು... ಹಗಲುಗನಸುಗಳು
                                                        -ಅರಶಿ