
ನನ್ನ facebook ಗೆಳೆಯ jaikanth ಕೆಲವು ದಿನಗಳ ಹಿಂದೆ ತನಗೊಂದು ಕವಿತೆ ಬರೆದು ಕೊಡಲು ಮನವಿ ಮಾಡಿದ..ಸುಮಾರು ಏಳು ವರ್ಷಗಳಿಂದ ಶ್ರುತಿ ಎಂಬ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ.. ಆ ಹುಡುಗಿ ಅವನ ಪವಿತ್ರ ಪ್ರೀತಿಯನ್ನು ಕಡೆಗಣಿಸುತ್ತಿರುವುದಾಗಿ ತಿಳಿಸಿದ.. ಆ ಹುಡುಗಿ ಅವನನ್ನು ನಿರ್ಲಕ್ಷಿಸಿದರು ಏಳು ವರ್ಷಗಳಿಂದ ಒಂದಲ್ಲ ಒಂದು ದಿನ ಅವಳ ಪ್ರೀತಿಯನ್ನು ಪಡೆಯುವೆ ಎಂಬ ನಂಬಿಕೆಯಲ್ಲಿ ಕಾಯುತ್ತಿರುವ.. ಗೆಳೆಯನ ಪ್ರೀತಿಯ ಮೇಲೆ ಹೆಮ್ಮೆ ಅನಿಸಿತು.. ನನ್ನ ಈ ಸಾದಾರಣ ಕವಿತೆ ಅವನ ಪ್ರೀತಿಗೆ ನೆರವಾದರೆ ನಾ ದನ್ಯ.. jaikant ನಿನ್ನ ಪ್ರೀತಿ ನಿಜವಾಗಿದ್ದರೆ ಖಂಡಿತ ಶ್ರುತಿಯ ಪ್ರೀತಿ ನಿನಗೆ ದಕ್ಕುತ್ತದೆ.. ಒಳ್ಳೆಯದಾಗಲಿ ಗೆಳೆಯ.. -ಅರಶಿ
ರಾಗವಿರದೆ...
ಅಂತರಂಗದುಸಿರಲಿ
ಕೇವಲ ನಿನ್ನ ಹೆಸರಿದೆ
ಅಂತಃಪುರದ ಮನಸಲಿ
ಒಲವಿಗೆ ಅಂತ್ಯವೆಲ್ಲಿದೆ
ನನ್ನ ಉಳಿವೋ ಸಾವೋ
ನೀನೇಳೋ ಒಂದು ಮಾತಲ್ಲಿದೆ
ನಿನ್ನೆದುರು ಸೋತರೆ
ಈ ಜಗವನೆ ಗೆಲ್ಲುವೆ
ನಿನ್ನ ಮೌನ ಮುರಿಯದೆ
ಸೋಲು ಬಿಟ್ಟು ತೊಲಗದೆ
ಬಂದೊಮ್ಮೆ ಗೆದ್ದು, ನನ್ನ ಸೋಲಿಸಿ.. ಗೆಲ್ಲಿಸು....
ರಾಗವಿದ್ದೂ...
ಮುಳುಗುವ ಕನಸಿಗೆ
ಬಾ ಈಜಲು ಕಲಿಸು
ಮರಗುವ ಮನಸಿಗೆ
ನಿನ್ನ ಮನಸನು ತಿಳಿಸು
ಜೀವ ಸಿಲುಕಿದೆ ಮುಳ್ಳಿಗೆ
ಬಾ ನನ್ನ ಉಳಿಸು
ಏಳು ವರ್ಷವೋ ಏಳು ಜನ್ಮವೋ
ನಿನ್ನೆ ಕಾಯುವೆ ನಿನ್ನೆ ಬೇಡುವೆ
ನೆನ್ನೆ ಜನನವೋ, ನಾಳೆ ಮರಣವೋ
ನೀನೆ ನೆನ್ನೆಯು, ನೀನೆ ನಾಳೆಯು
ಈ ಜಗವೇ ನನಗೆ ನರಕವಿಲ್ಲೀ
ನಿನ್ನ ಮೌನ ಕೊಲುತ್ತಿರಲು
ಇದೇ ಜಗವೇ ಸ್ವರ್ಗವಿಲ್ಲೀ
ನಿನ್ನ ಮಾತು ನಗುತ್ತಿರಲು |
ಪ್ರತಿ ದಿನ ತಿರುವುವೆ
ನೆನಪಿನ ಪುಟವಾ
ಪ್ರತಿಕ್ಷಣ ಕಾಡುವೆ
ಬಿಡದಲೇ ಹಟವಾ
ಗೋತ ಹೊಡೆವ ಮುನ್ನ ಉಳಿಸು
ನನ್ನ ಎದೆಯ ಗಾಳಿಪಟವಾ
ಸೂತ್ರ ನೀನು, ಪಾತ್ರ ನಾನು
ಜತೆಬರಲು ನೀನು, ಬೇಡ ಏನು
ನೀನಾಡದ ಮಾತಿಗೆ ನನದೊಂದು ಕೋರಿಕೆ
ನುಡಿಯುತ ಸೂಚನೆ ನೀಡುತ ಹೋಗು
ನಾ ಬರೆಯುವ ಕವಿತೆಯ ಪ್ರತಿ ಸಾಲಾಗು ||
ಇನ್ನು ಜನಿಸದ ಬ್ರೂಣಕೆ
ಎಂದು ನೀಡುವೆ ಜನನ
ನಿನ್ನೆ ಜಪಿಸುವ ಪ್ರಾಣಕೆ
ಹೇಳು ತರವೇ ಮರಣ
ಕನಿಕರ ತೋರದೆ ಕರುಣಿಸು ಬಾರೆ
ಒಲವಿನ ಇರುವಿಕೆ ಜಗತ್ತಿಗೆ ತೋರೆ
ಉಸಿರೋಗೋ ಮುನ್ನ, ಕೂಗೊಮ್ಮೆ ನನ್ನ
ಮಡಿಯುವ ಖುಷಿಗೆ, ನಿನ್ನೊಲವೆ ತಾಣ
ನೀನಾಡುವ ಮಾತಿಗೆ ಇನ್ನಿಲ್ಲ ಹೋಲಿಕೆ
ಕಡೆಗಣಿಸುತ ಹಾಗೆ ನಿಂತೊಮ್ಮೆ ಸಾಗು
ನಾ ನುಡಿಸುವ ರಾಗಕೆ ಬಾ ಶ್ರುತಿಯಾಗು ||
-ಅರಶಿ
-ಅರಶಿ
No comments:
Post a Comment