Wednesday, February 23, 2011

ಲೈಫು ಇಷ್ಟೇನೆ...!

ಲೈಫು ಇಷ್ಟೇನೆ 
ಸ್ಪಷ್ಟ ಇಲ್ಲ, ಎಂದು ಹೇಳಲು 
ಹೊರಟರು ದೊಡ್ಡವರು 
ಲೈಫು ಇಷ್ಟಾನೆ
ಕಷ್ಟ ಇಲ್ಲ, ಎಂದು ಸಾರಲು
ಹೊರಟರು ಚಿಕ್ಕವರು |

ಅರೆ ಬರೆ ಅನುಬವದಿ 
ಬಿಗಿಯಾದ ಈ ಜಗದಿ
ಏನೊ ಒಂದು ಮಾಡಲು ಹೋಗಿ ಎಡವಟ್ಟಾಯ್ತು
ದುಡುಕಿರೆ ಕಿರುಬಲದಿ
ಬಂತಮ್ಮ ನಮ್ಮ ಸರದಿ
ಏನೊ ಒಂದು ಹೇಳಲು ಹೋಗಿ ಎಕ್ಕುಟ್ಟೋಯ್ತು
          ನಿಜವಾಗಿ ಲೋಕ ಕುರುಡಾಗಿಹೋಯ್ತು
          ಬಣ್ಣ ಬಳಿದ ಖಾದಿಬ್ರಷ್ಟರ ನಾಟಕ ಕಾಣದಾಯ್ತು
          ಬಗೆಯಾಗಿ ದುಃಖ ಬಡಪಾಯಾಯ್ತು
          ಕಣ್ಣ ಕವಿದ ಬಡವರ ಸಿನಿಮಾ ವರ್ಷ ಓಡ್ತು
ಒಟ್ಟಿಗೆ ಕೂಡೊ ಕ್ಯೆಯಿಲ್ಲ
ದನಿಯಾ ಎತ್ತೊ ಬಾಯಿಲ್ಲ
ಹೋರಾಟಕೆ ಯಾರಿಗೂ ಟೈಮಿಲ್ಲ
ಈ ವ್ಯೆವಸ್ಥೆಗಿಲ್ಲಿ ಕೊನೆಯಿಲ್ಲ
ನಮ್ಮ ಅವಸ್ಥೆ ಎಂದು ಮುಗಿಯಲ್ಲ ||

ಬದುಕಿರಿ ಸಣ್ಣಬಿಲದಿ
ಸತ್ತರು ಜನಬರದಿ
ನಾಯಕರಿಗಂತೂ ಏನು ಅನಿಸಲೆಯಿಲ್ಲ ಸಾಕಾಗಿಹೊಯ್ತು
ಸುಳ್ಳುಬರೆ ಈಜಗದಿ
ನಕ್ಕರು ಈಜುಕೊಳದಿ
ಖಾದಿ, ಖಾವಿ ರಾಸಲೀಲೆ ಸೂಪರ್ ಹಿಟ್ ಆಯ್ತು 
         ಎಲ್ಲ ಸಾಲ ಬರೆದ ಮೇಲೆ 
         ಚಡ್ಡಿಚೀಲ ಅರಿದೆ ಹೋಯ್ತು
         ಜೀವನ ಸತ್ಯ ತಿಳಿದ ಮೇಲೆ
         ಕೊನೆಗೆ ಲೈಫು ಇಕ್ಕಟ್ಟಾಯ್ತು
ಬರೆದರು ಎಷ್ಟೇನೆ
ನೆನೆದರು ಎಷ್ಟೇನೆ
ಅದು ಮಾತ್ರ ಸ್ಪಷ್ಟಾನೆ
ನಿಜವೇ ಲೈಫು ಕಷ್ಟಾನೆ
ಹೌದು ಲೈಫು ಇಷ್ಟೇನೆ ||

       ಲೈಫು ಇಷ್ಟೇನೆ ಅಂದ ದೊಡ್ಡವರಿಗೆ(ಯೋಗರಾಜ್ ಭಟ್) ಮತ್ತು  ಪಂಚರಂಗಿ ಟೀಂಗೆ ಜೈ...
 

No comments:

Post a Comment