Wednesday, May 25, 2011

ಬಾ ಸುಳ್ಳಿಗೂ ನೀನು ಸುಳ್ಳೆÃಳು....

ಚಂದಮಾಮನಾ.. ತೋರಿ
ಅಮ್ಮ ಕಲಿಸಿದಳೂ…. ಸುಳ್ಳು
ಹೊಡೆವ ಬೆತ್ತವಾ.. ತೋರಿ
ಮೇಷ್ಟ್ರು ಕಲಿಸಿದರೂ…. ಸುಳ್ಳು
ಜಗದ  ಚಿತ್ರವಾ.. ತೋರಿ
ಕಾಲ ಕಲಿಸಿತೂ…. ಸುಳ್ಳು
         ಇಲ್ಲಿ ನನ್ನಾ ಯಾವ ತಪ್ಪಿಲ್ಲ
         ಈ ಜನರದೆ ಎಲ್ಲಾ….
         ಈ ಜಗದಲಿ ಯಾರು ಸಾಚರಿಲ್ಲ
         ಈ ಬದುಕಾ ನಡೆಸಲು ಏನೆಲ್ಲಾ
ಸುಳ್ಳಿನಾ.. ಇರುಳಲಿ ಬದುಕಿನಾ..  ಬೆಳಕಿದೆ
ಬುದ್ದಿಯಾ.. ಮರುಳಲಿ ಉತ್ತುಂಗದಿ ಹಣವಿದೆ
ಅದ ಗಳಿಸಲು ನೀನು ಸುಳ್ಳೆÃಳು...

ಅಳಿಸೋ ಸತ್ಯಕ್ಕಿಂತ
ನಗಿಸೋ ಮಿತ್ಯ ವಾಸಿ
ಅರಸೋ ಬರಿಕ್ಯೆಗಿಂತ
ನಡೆಸೋ ಕಾಲೆ ವಾಸಿ
ಈ ಸತ್ಯವಾ ನೀ ತಿಳಿ
ಬದುಕಿದೂ ನಲಿಯಲಿ
ಸುಳ್ಳಿನಾ ಜಗದಲಿ
ಬದುಕು ನೀ ಸುಳ್ಳಲಿ
           ಮೋಸ ಬೇಡ, ವಂಚನೆ ಬೇಡ
           ವೇಷ ಬೇಡ, ಯಾವಾದರ್ಷ ಬೇಡ
           ಸುಮ್ಮನೆ ನೀನು ಸುಳ್ಳೆÃಳು
           ಈ ಜಗದಲಿ ನಗುತಾ ನೀಬಾಳು ||

ಸತ್ಯದ ಸೆರೆಮನೆಗಿಂತ
ಸುಳ್ಳಿನ ಅರಮನೆ ವಾಸಿ
ಸತ್ಯದ ನಟನೆಗಿಂತ
ಸುಳ್ಳಿನ ಪಟನೆ ವಾಸಿ
ನಿನ್ನ ಅಳೆವುದೇ.. ಹಣದಲಿ
ಅದ ಗಳಿಸಲು ನೀ ಕಲಿ
ಮೂರು ದಿನಾ.. ಬಾಳಲಿ
ಬದುಕು ನೀ ಸುಳ್ಳಲಿ
           ಪಾಪ ಪುಣ್ಯ ಎಲ್ಲ ಸುಳ್ಳೇ
           ನ್ಯಾಯ ನೀತಿ ಎಲ್ಲ ಪೊಳ್ಳೆ
           ಸತ್ಯದ ನಿದ್ದೆಬಿಟ್ಟು ಎದ್ದೇಳು
           ಬಾ ಸುಳ್ಳಿಗೂ ನೀನು ಸುಳ್ಳೆÃಳು ||
 
                                              ಅ.ರ.ಶಿ

No comments:

Post a Comment