ಆ ಮೂರನೇ ಕ್ರಾಸ್ ನಲ್ಲಿ
ನೆಟ್ಟಿರುಳು ರಾತ್ರಿಯಲಿ
ಭಯವಾದರೂ ನೀ ಅಲ್ಲೇ ಇದದ್ದು
ಆ ಚಾವಣಿ ಇರದ ಬಸ್ ಸ್ಟಾಪ್ ನಲ್ಲಿ
ಮಳೆ ನಿನ್ನ ದಾರಾಕಾರವಾಗಿ
ನೆನೆಸಿದರು ನೀನಲ್ಲೇ ನಿಂತದ್ದು
ಮರದ ಎಲೆಗಳುದುರಿ ಬೋಳಾದ ಪಾರ್ಕಿನಲ್ಲಿ
ಮುಸ್ಸಂಜೆಯಾದರು ನೀ ಕುಂತದ್ದು
ಆ ಪೂರ ಮೂರು ಮುಕ್ಕಾಲು ವರ್ಷ ..............
ಎದೆ ಭಾರವಾಗುತ್ತಿದೆ ಹುಡುಗಿ
ಕಂಬನಿ ಪುಟಿದೇಳುತ್ತಿದೆ
ಆ ಪೂರ ಮೂರು ಮುಕ್ಕಾಲು ವರ್ಷ
ನೀ ಕಾದದ್ದು ಈ ಅಲೆಮಾರಿಗಾಗಿಯೇ..?
ನಿನ್ನಂತ ಸುಂದರಿ ನನ್ನಂತ ಬಡಪಾಯಿಯನ್ನು
ಪ್ರೀತಿಸಬಹುದು ಎಂಬ ಸಣ್ಣ ಸಂಶಯ
ಸಹ ಅದೇಗೆ ಬರಲು ಸಾದ್ಯ
ಅಂತಃಪುರದ ಮಹಾರಾಣಿ ಯಂತೆ
ಕಂಡ ನನ್ನ ಡವ ಡವ ನೀನು
ಇಲ್ಲೇ ನಿಂತು ಎಲ್ಲೋ ನೋಡುವ
ಬೆಳಕನುಡುಕುವ ಬಡವ ನಾನು
ಸಣ್ಣ ಸುಳಿವನ್ನಾದರು ನೀಡಬಾರದಿತ್ತೆ
ಸಪ್ತ ಸಾಗರವನ್ನಾದರು ದಾಟಿ ಬರುತಿದ್ದೆ
ಕಾಲ ಮಿಂಚಿರಲು, ನೀ ದೂರವಾಗಿರಲು
ನನ್ನ ಆರ್ತನಾದ ನಿನಗೆ ಕೇಳಬಹುದೇ
ನನ್ನ ಕೇವಲ ಪದಗಳು ಸಮವಾಗಬಹುದೇ
ಹೆಚ್ಚೇನೂ ಹೇಳಲೀಗ ನಾನು
ನೆನಪಾಗಿ ಕಾಡುತ್ತಿರುವಾಗ ನೀನು
ಅಭಿಸಾರಿಕೆ ನಿನಗಭಿನಂದನೆ |
ಜಗದ ನಿಯಮಗಳ ಗುಂಗಿಲ್ಲ, ಹಂಗಿಲ್ಲ
ನೀ ಮೆಚ್ಚಿದರೆ, ಮತ್ತೆ ಒಪ್ಪಿದರೆ
ಬರೆವೆನೊಂದು ಇತಿಹಾಸ
ಸ್ವರ್ಗ, ನರಕಗಳ ಅರಿವಿಲ್ಲ, ಬೇಕಿಲ್ಲ
ನೀ ಸಿಕ್ಕಿದರೆ, ಬಿಗಿದಪ್ಪಿದರೆ
ಬಡಎದೆಯಲ್ಲೊಂದು ಮಂದಹಾಸ
ನಿನ್ನ ಚೆಲುವ ವದನದಲ್ಲಿದ್ದ ಬರಿಗಣ್ಣಿಗೆ ಕಾಣದ
ಒಲವೆಂಬ ಸೂಕ್ಷ್ಮ ಬೆಳಕಿನ ಕಿರಣಗಳ
ನೋಡಲು ನಾನಾಗಿರಲಿಲ್ಲ ಮಿಂಚುಹುಳ
ನನ್ನ ಎದೆಯಲ್ಲಿನ ಜಗದೊಲುಮೆಯ ಮೀರುವ
ಒಲವ, ಅಂಜುಬುರಕನಲ್ಲದ ನಾ ತಿಳಿಸದೇ ಹೋದದೇಕೆ
ಅರಿಯುವುದೇಗೆ ವಿಧಿಯಾಟದ ಸಂಚುಗಳ
ಕಾಲವೊಮ್ಮೆ ಹಿಂದಕ್ಕೆ ಚಲಿಸಬಾರದೆ
ನಿನ್ನ ಆನಂತರದ ಬಾಳು ಕನಸಾಗಬಾರದೆ
ಇಲ್ಲ ನನಗದು ಭ್ರಮೆಯಾಗಬಾರದೆ
ನಿನ್ನ ನೆನಪೆಲ್ಲ ಕ್ಷಣಕೊಂದು ಚೆಂಡಾಗಿ
ನನ್ನನ್ನು ಚೆಂದಾಡುತ್ತಿದೆ ಹುಡುಗಿ
ಕೊನೆಸಾರಿ ನಿನ್ನೊಮ್ಮೆ ಬಿಗಿದಪ್ಪಿ
ಅತ್ತು ಬಿಡುವ ಬಯಕೆಯಿದೆ ಹುಡುಗಿ
ಬಾ ಒಮ್ಮೆ ತೋಳಾಗು.....

No comments:
Post a Comment