ಕ್ಷಮಿಸಿಬಿಡು ಕ್ಷಮಿಸಿಬಿಡು
ನಿನಗೇಳದೆ, ನಿನ್ನ ಪ್ರೀತಿಸುತಲಿರುವೆ
ಬಂದುಬಿಡು ಬಂದುಬಿಡು
ನನಗೇಳದೆ, ಕನಸಲಿ ಕಾಯುತಲಿರುವೆ
ನಿನ್ನಿಂದ ಏನೊಂದು ನಿರೀಕ್ಷೆಯಿಲ್ಲ
ಅಪ್ಪಣೆ ಕೊಡುವೆಯ
ನಾ ನನ್ನ ಪಾಡಿಗೆ ಪ್ರೀತಿಸಲು
ನನ್ನಿಂದ ಯಾವೊಂದು ತೊಂದರೆ
ನಿನಗಿಲ್ಲ ಒಪ್ಪಿಗೆ ನೀಡುವೆಯ
ನಾ ನಿನ್ನ ನೆನಪಲೆ ಜೀವಿಸಲು |
ಬರೆಯಲು ಸ್ಪೂರ್ತಿಯ ತಂದೆ
ಬಾಳಲಿ ನವ ಒಲವನು ತಂದೆ
ಕಾಣಲು ಕನಸುಗಳ ತಂದೆ
ನೆನೆಯಲು ನೆನಪುಗಳ ತಂದೆ
ಇಷ್ಟೊಂದೆಲ್ಲ ತಂದ ನಿನಗೆ
ನನ್ನಿಂದೇನು ತರಲಾಗಲಿಲ್ಲ
ಕ್ಷಮಿಸಿಬಿಡು ಕ್ಷಮಿಸಿಬಿಡು
ನೀನೆ ವಿಶೇಷ ಉಡುಗೊರೆ ನನಗೀಜಗದಲಿ
ನಿನ್ನ ಮುಂದಿನ ಬಾಳಿಗೆ ವಿಶೇಷ
ಉಡುಗೊರೆಯ ಎಲ್ಲಿಂದ ತಂದು ನೀಡಲಿ ||
ನಿನ್ನ ಮುಂದಿನ ಬಾಳಿಗೆ ವಿಶೇಷ
ಉಡುಗೊರೆಯ ಎಲ್ಲಿಂದ ತಂದು ನೀಡಲಿ ||
ತಂತಿ ಹರಿದ ವೀಣೆಯ ಮೀಟಿ
ಹೊಸದೊಂದು ಸ್ವರವ ನೀಡಿದೆ
ಬತ್ತಿ ಮುಗಿದ ದೀಪವ ಹಚ್ಚಿ
ಎಂದು ಹಾರದ ಬೆಳಕ ಮೂಡಿಸಿದೆ
ಇಷ್ಟೆಲ್ಲಾ ನೀಡಿದ ನಿನಗೆ
ನನ್ನಿಂದೇನು ನೀಡಲಾಗಲಿಲ್ಲ
ಕ್ಷಮಿಸಿಬಿಡು ಕ್ಷಮಿಸಿಬಿಡು
ನೀನೆ ನನ್ನ ಭಾವವ ಮೀರಿದ ಆಶಯ
ನಿನ್ನ ನಾಳೆಯ ಬದುಕಿಗೆ
ಹೇಗೆ ಬಂದು ಹೇಳಲಿ ಶುಭಾಶಯ ||
"tanti harida veeneya meeti...,hosadondu svarava needide..,batti mugida deepava hacchi endu harada belaka mudiside"
ReplyDeletechandada saalugalu...chennagide kavite...:)
thank u vidya
ReplyDelete