Saturday, December 10, 2011

ಅಯ್ಯೇಯ್ಯೋ ಲಬ ಲಬ ಲಬ ಲಬ ಲವ್ ...



 ಪ್ರೀತಿಸಿದ ಹುಡುಗಿ ದೂರ ಆದಾಗ ಆಗೋ ನೋವು, ಹುಡುಗರ್ಗೆ ಒಂತರ ಎಣ್ಣೆ  ಹೊಡೆಯೋಕೆ ನೆಪ, ಎಂತ ಯಾರ್ಯಾರೋ ಹೇಳ್ತಿದ್ರು , ನಿಜಾನೋ ಸುಳ್ಳೋ....? ಆದ್ರೆ ಹುಡಗರು ಎಣ್ಣೆ ಹೊಡೆಯೋದ್ ಅಂತು ಸತ್ಯ... ಎಣ್ಣೆ ಹೊಡೆದ್ ಮೇಲೆ, ಡೈಲಾಗ್ ರೈಟರ್ ಆಗೋಗ್ತಾರೆ, ಅದೆಲ್ಲಿಂದ ಬರುತ್ತೋ ಆ ಪರಿ ಡೈಲಾಗ್ಸು, ಎಣ್ಣೆ ಹೊಡೆದೋನೆ ಬಲ್ಲ,
ಪಾಪ ಹುಡಗರು ಎಣ್ಣೆ ಹೊಡ್ಕೊಂಡು  ಅಯ್ಯೇಯ್ಯೋ ಲಬ ಲಬ ಲಬ ಲಬ ಅಂತ ಒಳಗೇ ಬಡ್ಕೋತ ಇದ್ರೂ, ಹಾಳಾದ ಹುಡ್ಗೀರ ಕೀವೀಗೆ ಅದು ಕೇಳ್ ಸೋದೆ   ಇಲ್ಲ, ಅವರ ಪಾಡಿಗೆ ಅವ್ರು ಆರಾಮಾಗಿ ಇರ್ತಾರಾ...? ಅಥವಾ ಪಾಪ ಅವ್ರು ಒಳಗೇ  ಅಯ್ಯೇಯ್ಯೋ ಲಬ ಲಬ ಲಬ ಲಬ ಬಡ್ಕೋತ ಇರ್ತಾರ ..? ಯಾರಿಗೆ ತಾನೇ ಗೊತ್ತು ?
ನನ್ನ ಕಾಲ್ಪನಿಕ ಕಥಾನಾಯಕ ಗಂಟಲ್ ತನಕ ಎಣ್ಣೆ ಹೊಡೆದು, ಹೊಸ ಸ್ಟೈಲ್ ನಲ್ಲಿ, ಹೊಸ ತರ ತನ್ನ ನೋವನ್ನ ಒಬ್ನೇ  ಹೇಳ್ಕೋತ ಇದಾನೆ.... ಒಂದ್ಸಾರಿ ಓದಿ....

ಇದು ಪ್ರತೀ ಪ್ರೇಮಿಯ ಅಂತರಾಳದ ಲಬ ಲಬ ಕೂಗು
ಓದಿ ನೀವು ಕೂಡ ಲಬ ಲಬ ಅಂತ ಬಾಯ್ ಬಡ್ಕೋಳಿ
ಏಕಂದ್ರೆ ಹಾರ್ಟ್ಗೆ ನೋವಾದಾಗ ಬಾಯ್ ಬಡ್ಕೊಂದ್ರೆ ನೋವು ಕಡೆಮೆ ಆಗುತ್ತಂತೆ
ಬಾಯ್ ಬಡ್ಕೊಂಡು ಕೊನೇಲಿ ಬಾಯ್ತುಂಬಾ ಬಯ್ದುಬಿಡಿ ಎಲ್ಲ ನೋವು ಓಡೋಗುತ್ತೆ 
ಬಾಯ್ ಬಡ್ಕೋಳಿ... ಇಲ್ಲ ಹಾಳಾಗ್ ಹೋಗಿ ....
ನಾನು ಈ ಹಾಡನ್ನ ನನ್ನದೇ ಟ್ಯೂನ್ ನಲ್ಲಿ ಆಗಾಗ ಹಾಡ್ಕೋತ ಇರ್ತೀನಿ
ನೀವು ಕೂಡ ನಿಮಗೆ ಅನಿಸಿದ ಟ್ಯೂನ್ ನಲ್ಲಿ ಹಾಡ್ಕೋಳಿ.. ಬಡ್ಕೋಳಿ...

                                                                                             - ಅರಶಿ ಅಯ್ಯೇಯ್ಯೋ ಲಬ ಲಬ ಲಬ ಲಬ
ಅಯ್ಯೇಯ್ಯೋ ಲಬ ಲಬ ಲಬ ಲಬ
ಅಯ್ಯೇಯ್ಯೋ ಲಬ ಲಬ ಲಬ ಲಬ ಲವ್
ಒಂದ್ಸಾರಿ ನೋಡೆ
ನನ್ ಪ್ರೀತಿ ಮಾಡೆ
ಹರಿವ ಕಂಬನಿ ಈಗ ಮಾತನಾಡಿದೆ
ಒಂದ್ಸಾರಿ ಬಾರೆ
ನನ್ ಜತೆ ಸೇರೆ
ನುಡಿವ ಕಣ್ಣಿದು ಈಗ ಮೌನವಾಗಿದೆ
     ನೀನು ಇರದ ಕ್ಷಣವನು ನೆನೆಯಲಾರೆನು
     ನೀನು ಕೊಟ್ಟ ನೆನಪನು ಮರೆಯಲಾರೆನು
ಮೌನ ಮುರಿದು ಮಾತನಾಡು ಬಾರೆ
ಬೆವರ್ಸಿಯಾ  ಪ್ರೇಯಸಿ |

ಅರಚಿಕೊಂಡು, ಪರಚಿಕೊಂಡು, ಕಿರುಚಿಕೊಂಡೆನು
ನಿನ್ನ ಮಾತ ಗುಂಗಿನಲ್ಲಿ ಮೂಖನಾದೆನು
ಅಡಗಿಕೊಂಡು, ಮುದುಡಿಕೊಂಡು, ಸಿಲುಕಿಕೊಂಡೆನು
ನಿನ್ನ ಪ್ರೇಮ ಪಾಶದಲ್ಲಿ ಮೂಡನಾದೆನು
      ಪರಚಿಕೊಂಡ ಹೃದಯಕ್ಕೀಗ
      ಮದ್ದು ಹಾಕಿಸು
      ಗೀಚಿಕೊಂಡ ಹಣೆಯ ಬರಹ
      ಬಂದು ಬದಲಿಸು
ಓಡಿಬಂದು ಬೇಗ ನನ್ನ ಸೇರೆ
ಈ ಬಿಕನಾಸಿಯ ಬೀಗುತಿ
||

ಎದುರುಗಿಟ್ಟ ಚಿತ್ರಾನ್ನ ಅಳಸಿಹೋಹಿತು
ನಿನ್ನ ನೆನಪಿನಲ್ಲಿ ಹಸಿವು ಮಾಯವಾಹಿತು
ಮುನಿಸಿಕೊಂಡ ನಿದಿರೆ ಕೂಡ ನನ್ನ ತೊರೆಯಿತು
ಹೋಗು ದೂರ ಎನ್ನುತಾ ಜಾಡ್ಸಿ ಒದೆಹಿತು
       ಎಷ್ಟು ಸಾರಿ ಕೂಗಲಿ ನಿನಗೆ ಕೇಳಲು
       ಇನ್ನು ಕೇಳದೆ ಈ ಮನದ ಮಾತದು
       ಒಂದು ಬಾರಿ ಬಂದುಹೋಗೆ ಹಾಗೆ ಸುಮ್ಮನೆ
       ಸರಿಸು ಬೇಗನೆ ಈ ಹುಚ್ಚು ಯಾತನೆ
ಬರದೆ ಇದ್ರೆ ಹಾಳಾಗಿ ಹೋಗೆ
ಈ ಹೃದಯರಾತ್ರಿಯಾ ರಾಕ್ಷಸಿ 
||


No comments:

Post a Comment