Thursday, October 7, 2010

ಮತ್ತೆ ಮತ್ತೆ ಅನಿಸುತ್ತಿದೆ..!














ಮತ್ತೆ ಮತ್ತೆ ಅನಿಸುತ್ತಿದೆ
ಊಹಲೋಕ ತೆರೆಯುತ್ತಿದೆ 
ನಾನು ನಿನ್ನೊಂದಿಗೆ 
ನೀನು ನನ್ನೊಂದಿಗೆ 
ಇರುವಂತ ಭಾಸ ಭ್ರಮಿಸುತ್ತಿದೆ 
ಇನ್ನು ಅನಿಸುತ್ತಿದೆ... ತುಂಬಾ ಅನಿಸುತ್ತಿದೆ..
ಮತ್ತೆ ಮತ್ತೆ ಅನಿಸುತ್ತಿದೆ 
ಇಹಲೋಕ ಮರೆಯುತ್ತಿದೆ ||ನಾನು||

ಆ ಬನಾಂಗಳ, ಈಗ ಬರಿದಾಗಿದೆ 
ನೀನು ಎಲ್ಲಿರುವೆ ಎಂದು ಹುಡುಕುತ್ತಿದೆ 
ಈ ಮನದಾಂಗಳ ಈಗ ಹೊಸದಾಗಿದೆ 
ನಿನ್ನ ಪಾದಾರ್ಪಣೆಯಾಗಲು ಅರಸುತ್ತಿದೆ 
          ನಾನಾ ಬಗೆಯ ಬಣ್ಣದಲಿ 
          ಒಲವಿನುಡುಗೊರೆ, ಸಿಂಗರಿಸಿ
          ತೆರೆದ ಎದೆಯ ಚಿಪ್ಪಿನಲ್ಲಿ
          ನಿನ್ನ ನೆನಪ ಅಲಂಕರಿಸಿ
ನಿನ್ನ ನಾ ನೋಡಲು
ನೋಡಿ ಮಾತಾಡಲು
ಜೊತೆ ಓಡಾಡಲು
ಎದೆ ಹಾಡಾಗಲು
ನನ್ನ ಈ ಜೀವ ಬದುಕುತ್ತಿದೆ
ಇನ್ನು ಅನಿಸುತ್ತಿದೆ... ತುಂಬಾ ಅನಿಸುತ್ತಿದೆ..||ಮತ್ತೆ ಮತ್ತೆ||

ಆ ಮಳೆಮೋಡದಿ ಈಗ ಸದ್ದಾಗಿದೆ
ಹನಿ ನಿನ್ನ ಮೈಸೋಕಿಮೈಮರೆಯಲು ಇಳಿಯುತ್ತಿದೆ
ನನ್ನ ಈ ಪ್ರಾಣದಿ ಈಗ ಸದ್ದೋಗಿದೆ
ನಿನ್ನ ಉಸಿರಿಡಿದು ಜೀವಪಡೆಯಲು ಅಲೆಯುತ್ತಿದೆ
          ಹಿಂದೆಂದೋ ಆವುದೋ ಜನ್ಮದಲ್ಲಿ
          ನಿನ್ನೊಡನೆ ಕೂಡಿ ಬಾಳಿದಂತೆ
          ಇಲ್ಲೆಲ್ಲೋ ನಿಂತು ಪ್ರೀತಿಯಲ್ಲಿ
          ನಿನನ್ನಾ  ಕೂಗಿ ಕರೆದಂತೆ
ಏನೋ ನೀನೀಡಲು
ನಾನು ಮೈಮರೆಯಲು
ಮತ್ತೆ ನಾ ಕೇಳಲು
ನೀನಾಚಿ ಓಡೋಗಲು
ನನ್ನ ಈ ಭಾವ ಅರಳುತ್ತಿದೆ
ಇನ್ನು ಅನಿಸುತ್ತಿದೆ... ತುಂಬಾ ಅನಿಸುತ್ತಿದೆ..||ಮತ್ತೆ ಮತ್ತೆ||
                                                                               -ಅರಶಿ
 

No comments:

Post a Comment