ಮನಸು ಬರುಡಾದ ಜನರ ಮರೆತು
ಬಾ ಹೊಸ ಕನಸು ಕಾಣುವ
ಕಣ್ಣು ಕುರುಡಾದ ಜಗವ ಮರೆತು
ಕಣ್ಣು ಮುಚ್ಚಿ ನಡೆಯುವ
ಅರಳಿದೆ ಬಾಡಿಹೋದ ನನ್ನೆದೆ
ಅದಕೆ ನೀನೆ ಕಾರಣ............|
ಓದಬೇಡ ಯಾವ ಪತ್ರಿಕೆಯ
ಕೊಲೆ, ಸುಲಿಗೆ, ಮೋಸ, ವಂಚನೆ
ಬರೀ ರಾಜಕಾರಣ,
ಓದು ಬಾ ನನ್ನೆದೆಯ
ಬರೆದಿರುವೆ ನವಿರಾದ ಕವನವ
ಅದಕೆ ನೀನೆ ಕಾರಣ............||
ಹಾಡಬೇಡ ಈ ಲೋಕದಲಿ
ಇಲ್ಲಿ ಯಾರು ಕೇಳರು
ಮನದಿ ಬರೀ ಹಗೆಯ ತೋರಣ,
ಹಾಡು ಬಾ ನನ್ನೆದೆಯಲಿ
ವಿಶಾಲವಾಗಿ ಅರಡಿಹುದು
ಅದಕೆ ನೀನೆ ಕಾರಣ............||
-ಅರಶಿ

No comments:
Post a Comment