ಅರ್ಥವಿದ್ದರು ಅರ್ಥಗೆಟ್ಟ ಪದಗಳು
ಮುಂದೆ ಬರೆವ ಆಲೋಚನೆಗಳು
ಕವಿದ ಕಾರ್ಮೋಡಗಳು
ದಾರಿ ಕಾಣದ ತಿರುವುಗಳು
ಚಲಿಸದೆ ನಿಂತ ಪಾದಗಳು
ಎಲ್ಲೋ ಕೇಳುವ ದನಿಗಳು
ಸ್ಪಷ್ಟವಿಲ್ಲದ ಮಾತುಗಳು
ಕತ್ತಲಲ್ಲಿ ಮೂಡುವ ಭಾವನೆಗಳು
ಬರೆಯಲು ಕ್ಯಕೊಟ್ಟ ಇಂಕ್ ಮುಗಿದ ಪೆನ್ನುಗಳು
ಬರೆಯದೆ ಮರೆತ ಎಷ್ಟೋ ಸಾಲುಗಳು
ಪ್ರತಿ ಸಾಲಿನಲ್ಲಿ ಇಣುಕಲು ಯತ್ನಿಸಿ ಸೋತ ನೆನಪುಗಳು
ಸ್ಪೂರ್ತಿ ಇಲ್ಲದೆ ಸೋತ ಕವನಗಳು
ಏನೋ ನೆನೆದು ಮತ್ತೇನೋ ಬರೆದ ಬೆರಳುಗಳು
ಪದಗಳ ಅರಸಿ ಸದಾ ಹಾರಾಡುವ ಖಾಲಿ ಹಾಳೆಗಳು
ಸಪ್ತ ಸಾಗರದಾಚೆ ಇಣುಕುವ ಸುಪ್ತ ಮನಸುಗಳು
ನನಸಾಗದ ಎಷ್ಟೋ ಕನಸುಗಳು
ಎಲ್ಲ ಬರಿ ಕನಸುಗಳು... ಹಗಲುಗನಸುಗಳು
-ಅರಶಿ

No comments:
Post a Comment