Friday, October 22, 2010

ಎಲ್ಲಾ ನಿನದೆ, ನನದೇನಿಲ್ಲ...

 
 
 
 
 
 
 
 
 
 
 
 
 
 
 
 
 
 
 
 
ಎಲ್ಲಾ ನಿನದೆ, ನನದೇನಿಲ್ಲ
ಎಲ್ಲಾ ನೀನೆ, ನಾನೇನಿಲ್ಲ
ನನ್ನ ಕನಸು ನಿನದೆ 
ನನ್ನ ಮನಸು ನಿನದೆ 
ನನ್ನ ಮೌನ ನಿನದೆ 
ನನ್ನ ಮಾತು ನಿನದೆ 
     ಎಲ್ಲಾ ನಿನದೆ ನನದೇನಿಲ್ಲ
     ನಾ ಬರಿದೇ ದೇಹವು, ನೀನದರ ಜೀವವು  
     ಎಲ್ಲಾ ನೀನೆ, ನಾನೇನಿಲ್ಲ
     ನಾ ಬರಿದೇ ರಾಗವು, ನೀನದರ ಭಾವವು |
 
ಮುಸ್ಸಂಜೆಯ ಬಾನಿನ ಬನಕೆ
ನೀಡಿದ, ರಂಗೂ ನಿನದೆ
ಆಕಾಶದ ತಾರೆಗಳ ಬಣಕೆ
ಕಾಡಿದ, ಗುಂಗೂ ನಿನದೆ
     ನಾ ಕಣ್ಮುಚ್ಚಿ ಕಾಣುವ
     ಊಹಲೋಕವೆಲ್ಲ ನಿನದೆ
     ನಾ ಮನದಿ ಬಾಳುವ
     ಭಾವಲೋಕವೆಲ್ಲ ನಿನದೆ
ನನ್ನ ಹೊಳಪು ನಿನದೆ, ನನ್ನ ನೆನಪು ನಿನದೆ
ಎಲ್ಲಾ ನಿನದೆ, ನನದೇನಿಲ್ಲ
ನಾ ಬರಿದೇ ಮೂರ್ತಿಯು, ನೀನದರ ಕೀರ್ತಿಯು ||
 
ಈ ಧರೆಯ ಹೂಗಳು ಕೂಡ
ಬೇಡಿದ, ಗಂಧವು ನಿನದೆ
ಬಾನಿನ ಚಂದಿರ ಕೂಡ
ಕೇಳಿದ, ಅಂಧವು ನಿನದೆ
     ನಾ ಕಣ್ತೆರೆದು, ನೋಡುವ
     ಆಶಲೋಕವೆಲ್ಲ ನಿನದೆ
     ನಾ ಮನಸಾರೆ ಕೇಳುವ
     ಸ್ವರಲೋಕವೆಲ್ಲ ನಿನದೆ
ನನ್ನ ಬೆಳಕು ನಿನದೆ, ನನ್ನ ಬದುಕು ನಿನದೆ
ಎಲ್ಲಾ ನಿನದೆ ನನದೇನಿಲ್ಲ
ನಾ ಬರಿದೇ ಹೆಜ್ಜೆಯೂ, ನೀನದರ ದಾರಿಯು ||
                                                                   -ಅರಶಿ

No comments:

Post a Comment