ಅತ್ತ ಕೊಲೆ, ಇತ್ತ ಸುಲಿಗೆ
ಅತ್ತ ಲಂಚ, ಇತ್ತ ಹಗರಣ
ಅತ್ತ ಕೊಳಕು, ಇತ್ತ ಮೋರಿ ನೀರ ಬಳುಕು
ಅದರ ನಡುವೆ ಬಡವರಾ.... ಬದುಕು
ಗೆಳತಿ ಜಗವು ಪ್ರೀತಿ ಮರೆತಿದೆ
ನಾನು ನೀನು ಜತೆಗೂಡಿ
ಮರೆತ ಪ್ರೀತಿಯ ಜಗಕೆ ಜ್ಞಾಪಿಸುವ |
ಹಣದ ಮೋಹ ಮಿತಿಮೀರಿ
ಜನರ ಸ್ವಾರ್ಥ ಮೀರಿದೆ
ಇನ್ನೂ ಬೇಕೆಂಬ ಆಸೆ ಎಲ್ಲೆಮೀರಿ
ಜಗದಿ ಮಾನವೀಯತೆ ಮರೆಯಾಗಿದೆ ||
ಅಸಹಾಯಕ ಬಡವರ ಬೆನ್ನನೇರಿ
ಸಿರಿವಂತರು ಮಹಡಿ ಮೇಲೆ ಕೂತಿಹರು
ದುರ್ಬಲರನ್ನು ತುಳಿದುಕೊಂಡು
ಮುಂದೆ ಮುಂದೆ ಸಾಗುತಿಹರು ||
ನಾನು ನನ್ನದು ಎಂಬ ಸ್ವಾರ್ಥದಿ
ನೊಂದ ಜನರು ಮೂಕ ಶೋಕದಿ
ಗೆಳತಿ ಜಗವು ಪ್ರೀತಿ ಮರೆತಿದೆ
ನಾನು ನೀನು ಜತೆಗೂಡಿ
ಮರೆತ ಪ್ರೀತಿಯ ಜಗಕೆ ಜ್ಞಾಪಿಸುವ ||
-ಅರಶಿ

No comments:
Post a Comment