ಉಸಿರಳಿದ ಪರದಲು ನೀನೆ
ಈಗಿರುವ ಜನುಮವು ನೀನೆ
ಮುಂಬರುವ ಜನುಮವು ನೀನೆ
ನೀನೆ, ನೀನೆ, ನೀನೆ, ನೀನೆ,
ನಿನಗಾಗಿ ಬದಲಾಗಿ ಹೋದೆ ನಾನೆ.||ಪ||
ಮರುಜನ್ಮಕೆ ಮನವಿಯ ಮಾಡುವೆ
ಹೊಸಜನ್ಮವ, ಬಿಡದೆ ಕೇಳಿ ಪಡೆಯುವೆ
ಮತ್ತೆ ನಿನ್ನ ಹುಡುಕುವೆ
ಹುಡುಕಿ ನಿನ್ನನು ಸೇರುವೆ
ಈ ಜನ್ಮದ ಸಾವು, ನಿನ್ನ ನೆನಪೊಂದಿಗೆ
ಮರುಜನ್ಮದ ಹುಟ್ಟು ಅದು ನಿನ್ನೊಂದಿಗೆ
ಇನ್ನೊಂದೇ ಒಂದು ಜನ್ಮ
ನನಗಾಗಿ ಕರುಣಿಸು ಬ್ರಹ್ಮ ||
ಪದಕೆ ಪದಗಳ ಗುಣಿಸುವೆ
ಕವಿತೆಗಳ ಶಿಖರವ ಏರುವೆ
ದಿನವು, ತಪ್ಪದೆ ಕನಸಲಿ ನೋಡುವೆ
ಕ್ಷಣವೂ, ಹಗಲದೆ ನೆನಪಲಿ ಬಾಳುವೆ
ಈ ಜನ್ಮಕೆ ಇಷ್ಟೇ ಸಾಕು
ಮರುಜನ್ಮಕೆ ಬಾಕಿ ಉಳಿಸಬೇಕು
ಇನ್ನೊಂದೇ ಒಂದು ಜನ್ಮ
ನನಗಾಗಿ ಕರುಣಿಸು ಬ್ರಹ್ಮ ||
-ಅರಶಿ

No comments:
Post a Comment