Tuesday, October 19, 2010

ಅನುಪಮ





















ಒಂದು ಸುಂದರ ಮುಂಜಾನೆ
ಗೆಳತಿ ನಿನಗೆಂದೇ ಮೂಡುವುದು 
ನಿನ್ನ ಎಲ್ಲಾ ಕನಸುಗಳಾ
ಗೆಳತಿ ಅದು ನನಸು ಮಾಡುವುದು 
        ನಾಳೆ ಇದೆ ನಿನಗೆಂದು 
        ದೃತಿಗೆಡದೆ ನಡೆ ನೀನೆಂದು 
        ನಿನ್ನ ಹಾಡಿಗೆ ಎಂದು ನೀನೆ ಸರಿಗಮ 
        ನಿನ್ನ ನಿಲುವಿಗೆ  ಎಂದು ನೀನೆ ಅನುಪಮ | 

ಎನಿತು ಚಂದ ನೀ, ಒಳಗಣ್ಣಿನಿಂದ
ಒಮ್ಮೆ ನೋಡಿಕೋ ಮನಸಿನ ಕನ್ನಡಿ
ನೆನ್ನೆಯ ವ್ಯಥೆ ಮರೆತು, ನಾಳಿನ ಹೊಸ ಕಥೆಗೆ
ನೀನೆ ಬರೆದುಕೋ ಒಂದು, ಸುಂದರ ಮುನ್ನುಡಿ
        ಯಾರು ಮಾಡರು ನಿನ್ನ ವ್ಯಥೆಯ ಅನುವಾದ
        ನೀನೆ ಮಾಡಿಕೊ ನಿನ್ನ ಕಥೆಯ ಭಾವಾನುವಾದ
        ನೋವಿಗೆ ಕುಗ್ಗದಿರು, ಸೋಲಿಗೆ ಸೊರಗದಿರು
        ನಿನ್ನ ಛಲವನು ಹಿಡಿದು, ಗೆಳತಿ.. ನುಗ್ಗುತ್ತಿರು.. ಮುನ್ನುಗ್ಗುತ್ತಿರು... ||

ಒಮ್ಮೆ ಆಲಿಸಿ ನೀ, ನಿನ್ನನೆ ಕೇಳು
ಜೀವನವೆಂದರೆ ಎಂದು ಏಳು ಬೀಳು
ಆಸರೆಯಾಗಿ ಬರದಿರೆಯೇನು ಯಾರ ತೋಳು
ನಿನಗಾಗಿ ನಿನಗಿದೆ ನಿನದೆ ಬಾಳು
       ಬರಿ ಮಾತಿನ ಲೋಕವಿದು
       ಮಾತಲ್ಲೇ ಕೊಳ್ಳುವ ನಾಖವಿದು
       ಹೆದರಿಕೆಗೆ ಅಂಜದಿರು, ಅಡೆತಡೆಗೆ ಅಳುಕದಿರು
       ಯಾರ ಹಿಡಿತಕು ಸಿಗದೇ ಗೆಳತಿ, ಸಾಗುತ್ತಿರು.. ಮುಂದೆಸಾಗುತ್ತಿರು.. ||
                                                                                                                                                                                      -ಅರಶಿ

No comments:

Post a Comment